2 ಪೂರ್ವಕಾಲವೃತ್ತಾ 17 : 1 (KNV)
ಅವನ ಮಗನಾದ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು;
2 ಪೂರ್ವಕಾಲವೃತ್ತಾ 17 : 2 (KNV)
ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿ ಕೊಂಡನು. ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು ಯೆಹೂ ದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದು ಕೊಂಡ ಎಫ್ರಾಯಾಮಿನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು.
2 ಪೂರ್ವಕಾಲವೃತ್ತಾ 17 : 3 (KNV)
ಯೆಹೋಷಾಫಾಟನು ಬಾಳೀಮ್‌ ನನ್ನು ಹುಡುಕದೆ ತನ್ನ ತಂದೆಯಾದ ದಾವೀದನ ಮೊದಲಿನ ಮಾರ್ಗಗಳಲ್ಲಿ ನಡೆದದ್ದರಿಂದ ಕರ್ತನು ಅವನ ಸಂಗಡ ಇದ್ದನು.
2 ಪೂರ್ವಕಾಲವೃತ್ತಾ 17 : 4 (KNV)
ತನ್ನ ತಂದೆಯ ದೇವರನ್ನು ಹುಡುಕಿ ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ ಆತನ ಆಜ್ಞೆಗಳಲ್ಲಿ ನಡೆದನು.
2 ಪೂರ್ವಕಾಲವೃತ್ತಾ 17 : 5 (KNV)
ಆದದರಿಂದ ಕರ್ತನು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದನು. ಯೆಹೂದ ವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟ ದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ಅಧಿಕ ವಾಗಿ ದೊರಕಿತು.
2 ಪೂರ್ವಕಾಲವೃತ್ತಾ 17 : 6 (KNV)
ಅವನ ಹೃದಯವು ಕರ್ತನ ಮಾರ್ಗಗಳಲ್ಲಿ ಎತ್ತಲ್ಪಟ್ಟಿತು. ಇದಲ್ಲದೆ ಅವನು ಯೆಹೂ ದದಲ್ಲಿದ್ದ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ತೆಗೆದು ಹಾಕಿದನು.
2 ಪೂರ್ವಕಾಲವೃತ್ತಾ 17 : 7 (KNV)
ಇದಲ್ಲದೆ ಅವನ ಆಳ್ವಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ ಓಬದ್ಯನನ್ನೂ ಜೆಕರ್ಯನನ್ನೂ ನೆತನೇಲನನ್ನೂ ವಿಾಕಾ ಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೇಕಳುಹಿಸಿದನು.
2 ಪೂರ್ವಕಾಲವೃತ್ತಾ 17 : 8 (KNV)
ಅವರ ಸಂಗಡ ಲೇವಿಯರಾದ ಶೆಮಾಯನನ್ನೂ ನೆತನ್ಯನನ್ನೂ ಜೆಬದ್ಯನನ್ನೂ ಅಸಾ ಹೇಲನನ್ನೂ ಶೆವಿಾರಾಮೋತನನ್ನೂ ಯೆಹೋನಾತಾ ನನ್ನೂ ಅದೋನೀಯನನ್ನೂ ಟೋಬೀಯನನ್ನೂ ಟೋಬದೋನಿಯನನ್ನೂ ಇವರ ಸಂಗಡ ಯಾಜಕ ರಾದ ಎಲೀಷಾಮನನ್ನೂ ಯೆಹೋರಾಮನನ್ನೂ ಕಳು ಹಿಸಿದನು.
2 ಪೂರ್ವಕಾಲವೃತ್ತಾ 17 : 9 (KNV)
ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಕರ್ತನ ನ್ಯಾಯಪ್ರಮಾಣದ ಪುಸ್ತಕ ಇತ್ತು; ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ ಜನರಿಗೆ ಬೋಧಿಸಿದರು.
2 ಪೂರ್ವಕಾಲವೃತ್ತಾ 17 : 10 (KNV)
ಕರ್ತನ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದದ್ದರಿಂದ ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡ ಲಿಲ್ಲ.
2 ಪೂರ್ವಕಾಲವೃತ್ತಾ 17 : 11 (KNV)
ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋ ಷಾಫಾಟನಿಗೆ ಕಾಣಿಕೆಗಳನ್ನೂ ಕಪ್ಪದ ಹಣವನ್ನೂ ತಂದರು, ಅರಬ್ಬಿ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು.
2 ಪೂರ್ವಕಾಲವೃತ್ತಾ 17 : 12 (KNV)
ಹೀಗೆ ಯೆಹೋಷಾಫಾಟನು ಬರಬರುತ್ತಾ ಬಹಳ ದೊಡ್ಡವನಾಗಿ ಯೆಹೂದದಲ್ಲಿ ಕೋಟೆ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
2 ಪೂರ್ವಕಾಲವೃತ್ತಾ 17 : 13 (KNV)
ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ಬಹಳ ಕೆಲಸಗಳನ್ನು ನಡಿಸುತ್ತಾ ಇದ್ದನು. ಪರಾಕ್ರಮಶಾಲಿಗಳಾದ ಯುದ್ಧದ ಮನುಷ್ಯರು ಯೆರೂ ಸಲೇಮಿನಲ್ಲಿದ್ದರು.
2 ಪೂರ್ವಕಾಲವೃತ್ತಾ 17 : 14 (KNV)
ತಮ್ಮ ಪಿತೃಗಳ ಮನೆಯ ಪ್ರಕಾರ ವಾಗಿರುವ ಅವರ ಲೆಕ್ಕವೇನಂದರೆ, ಯೆಹೂದದ ಸಹಸ್ರಗಳ ಅಧಿಪತಿಗಳಲ್ಲಿ ಅದ್ನನು ಮುಖ್ಯಸ್ಥನಾಗಿ ದ್ದನು; ಅವನ ಸಂಗಡ ಪರಾಕ್ರಮಶಾಲಿಗಳು ಮೂರು ಲಕ್ಷಮಂದಿ ಇದ್ದರು.
2 ಪೂರ್ವಕಾಲವೃತ್ತಾ 17 : 15 (KNV)
ಅವನ ತರುವಾಯ ಅಧಿಪತಿ ಯಾದ ಯೆಹೋಹಾನಾನನು; ಅವನ ಸಂಗಡ ಎರಡು ಲಕ್ಷದ ಎಂಭತ್ತು ಸಾವಿರ ಮಂದಿಯು.
2 ಪೂರ್ವಕಾಲವೃತ್ತಾ 17 : 16 (KNV)
ಇವನ ತರುವಾಯ ಕರ್ತನಿಗೆ ತನ್ನನ್ನು ಮನಃಪೂರ್ವಕವಾಗಿ ಒಪ್ಪಿಸಿದ ಜಿಕ್ರಿಯ ಮಗನಾದ ಅಮಸ್ಯನು; ಅವನ ಸಂಗಡ ಎರಡು ಲಕ್ಷಮಂದಿ ಪರಾಕ್ರಮಶಾಲಿಗಳು.
2 ಪೂರ್ವಕಾಲವೃತ್ತಾ 17 : 17 (KNV)
ಬೆನ್ಯಾವಿಾನ್ಯರಲ್ಲಿ ಪರಾಕ್ರಮಶಾಲಿಯಾದ ಎಲ್ಯಾದ ವನು; ಅವನ ಸಂಗಡ ಬಿಲ್ಲನ್ನೂ ಗುರಾಣಿಯನ್ನೂ ಧರಿಸಿಕೊಂಡಿರುವ ಎರಡು ಲಕ್ಷ ಮಂದಿಯು.
2 ಪೂರ್ವಕಾಲವೃತ್ತಾ 17 : 18 (KNV)
ಇವನ ತರುವಾಯ ಯೆಹೋಜಾಬಾದನು; ಅವನ ಸಂಗಡ ಯುದ್ಧಕ್ಕೆ ಸಿದ್ಧವಾಗಿರುವ ಲಕ್ಷದ ಎಂಭತ್ತು ಸಾವಿರ ಮಂದಿಯು.ಅರಸನಿಂದ ಸಮಸ್ತ ಯೆಹೂದ ದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇರಿಸಲ್ಪಟ್ಟ ವರ ಹೊರತಾಗಿ ಇವರು ಅರಸನ ಬಳಿಯಲ್ಲಿ ಕಾಯುತ್ತಿದ್ದರು.
2 ಪೂರ್ವಕಾಲವೃತ್ತಾ 17 : 19 (KNV)
ಅರಸನಿಂದ ಸಮಸ್ತ ಯೆಹೂದ ದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇರಿಸಲ್ಪಟ್ಟ ವರ ಹೊರತಾಗಿ ಇವರು ಅರಸನ ಬಳಿಯಲ್ಲಿ ಕಾಯುತ್ತಿದ್ದರು.

1 2 3 4 5 6 7 8 9 10 11 12 13 14 15 16 17 18 19

BG:

Opacity:

Color:


Size:


Font: